Thursday, 31 December 2015




    ಹೊಸ ಪಾಠಪದ್ಧತಿಯಲ್ಲಿ ವಿದ್ಯಾರ್ಥಿಯಲ್ಲಿ ಜ್ಞಾನದ ಪೋಷಣೆಯೇ ಪ್ರಧಾನದ ಉದ್ದೇಶವಾಗಿದೆ. ನಮಗೆ ತಿಳಿದಿರುವಂತೆ ಇದೊಂದು ಸುಲಭದ ಹಾದಿಯಲ್ಲ. ವಿದ್ಯಾರ್ಥಿಯಲ್ಲಿ ದೈಹಿಕ ಮತ್ತು ಮಾನಸಿಕ ಸಿದ್ಧತೆಯನ್ನು ಉಂಟುಮಾಡಬೇಕು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಯೋಜನೆಯ ಪಾತ್ರ ಮಹತ್ತರವಾಗಿದೆ. ಇದರಿಂದಾಗಿ ಮಗುವು ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಿಳಿವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ. ಮಗುವಿಗೆ ಮಾನಸಿಕ ಸಂತುಲನವು ದೊರಕುತ್ತದೆ.
    ಕಲಿಕೆಯ ಹಂತದಲ್ಲಿ ಮಗುವಿಗೆ ವಿವಿಧ ಸಲಕರಣೆಗಳ ಆವಶ್ಯಕತೆ ಇದೆ. ಅವುಗಳಲ್ಲಿ ಕೆಲವು ಕಲಿಕೋಪಕರಣಗಳು, ಡಿಜಿಟಲ್ ಕಂಟೆಟುಗಳು ಇಲ್ಲಿ ಪ್ರಮುಖವಾಗಿವೆ. ಡಿಜಿಟಲ್ ಕಂಟೆಟುಗಳು ವೀಡಿಯೋ,ಪ್ರಸೆಂಟೇಶನ್ , ಚಿತ್ರಗಳು, ಕೊಲ್ಯಾಶ್‌, ವರ್ಕ್‌‌ಶೀಟ್, ಎನಿಮೇಶನ್‌ಗಳ ರೂಪದಲ್ಲೋ ಮಕ್ಕಳಲ್ಲಿ ಕುತೂಹಲ ಹಾಗು ಪಾಲ್ಗೊಳ್ಳುವಿಕೆಯನ್ನು ವೃದ್ಧಿಸುತ್ತದೆ. ನೇರವಾಗಿ ಕೆಲವೊಮ್ಮೆ ಅನುಭವಗಳನ್ನು ಕಲಿಕಾರ್ಥಿಗೆ ಕೊಡಲು ಸಾಧ್ಯವಾಗದು. ಇದಕ್ಕಾಗಿ ಐ.ಸಿ.ಟಿ ಸಾಮಾಗ್ರಿಗಳು ಪರ್ಯಾಯವಾಗಿವೆ.

    ಆದರೆ ನಮ್ಮಲ್ಲಿ ಕೆಲವು ಶಿಕ್ಷಕರು ತರಗತಿಯ ಮಟ್ಟದಲ್ಲಿ ಐ.ಸಿ.ಟಿ ಸಾಮಾಗ್ರಿಗಳನ್ನು ಒಟ್ಟು ಸೇರಿಸುವುದಕ್ಕೂ ರಚಿಸುವುದಕ್ಕೂ ಪರಿಣಾಮಕಾರಿಯಾಗಿ ಬಳಸುವುದಕ್ಕೆ ಹಿಂಜರಿಯುತ್ತಾರೆ. ಕೆಲವರು ನಿರ್ಲಕ್ಷ್ಯಭಾವವನ್ನು ತೋರಿಸಿ ಅತ್ತ ಮುಖ ಕೂಡ ಹಾಕುವುದಿಲ್ಲ. ಅಂತಹ ಶಿಕ್ಷಕರಿಗೆ ಬಳಸಲು ಸಹಕಾರಿಯಾಗುವಂತೆ ಐ.ಸಿ.ಟಿ ಸಾಮಾಗ್ರಿಗಳನ್ನು ಲಭ್ಯವಾಗುವಂತೆ ಮಾಡಿದರೆ ಉತ್ತಮವಲ್ಲವೇ.

     ಕಳೆದ ವರ್ಷ ಇದಕ್ಕಾಗಿ ನಡೆಸಿದ ಪ್ರಯತ್ನದ ಫಲವಾಗಿ ಐ.ಸಿ.ಟಿ ಸಾಮಾಗ್ರಿಗಳನ್ನು 10 ಮತ್ತು 7 ನೇ ತರಗತಿಗಳಿಗೆ “SMART@10ಹಾಗು “LASER” ಡಿವಿಡಿಗಳು ರಚನೆಯಾಯಿತು. ಅಧ್ಯಾಪಕ ಸಮೂಹವು ಇದರ ಸದುಪಯೋಗವನ್ನು ಪಡೆದಿದೆ.

     ಈ ವರ್ಷಾರಂಭದಲ್ಲಿ ಡಯೆಟ್ ಮತ್ತು IT@School ನ ಸಹಯೋಗದೊಂದಿಗೆ ಇನ್ನಷ್ಟೂ ವಿಸ್ತರಿಸಲು ಕೈಗೊಂಡ ಕಾರ್ಯಕ್ರಮವು “BLEND” ಬ್ಲೋಗುಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಯಿತು. ಇದಕ್ಕಾಗಿ ತಾಂತ್ರಿಕವಾಗಿ ನುರಿತ ಅಧ್ಯಾಪಕರ ಸೇವೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದು ಕಾಸರಗೋಡು ಜಿಲ್ಲಾ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ನಡೆಯಿತು. ಕೇರಳದ ಐ.ಸಿ.ಟಿ ಆಧಾರಿತ ಶಿಕ್ಷಣದಲ್ಲಿ ಇದೊಂದು ಹೊಸ ಮೈಲುಗಲ್ಲಾಗಿ ಮಾರ್ಪಟ್ಟಿತು.

     ಹೊಸ ಕಾರ್ಯಕ್ರಮ “TERMS” (E-Resource Management for School Teachers) ಪ್ರತಿ ತರಗತಿಯ ವಿಷಯಗಳಿಗೂ ಐಸಿಟಿ ಸಾಮಾಗ್ರಿಯ ಲಭ್ಯತೆಯ ಉದ್ದೇಶವನ್ನು ಇರಿಸಲಾಗಿದೆ. ವಿವಿಧ ಭಾಗಗಳಿಂದ ಶೇಖರಿಸಲ್ಪಟ್ಟವುಗಳು ಹಾಗು ಕೆಲವೊಂದು ನಮ್ಮಲ್ಲಿನ ನುರಿತ ಅಧ್ಯಾಪಕರಿಂದಲೇ ತಯಾರಿಸಲ್ಪಟ್ಟವುಗಳಾಗಿವೆ. ಅಧ್ಯಾಪಕರು ಇವುಗಳನ್ನು ಸ್ವೀಕರಿಸಬಹುದು ಹಾಗು ಅವುಗಳನ್ನು ಡೌನ್‌‌ಲೋಡ್ ಮಾಡಿ ಪರಿಣಾಮಕಾರಿಯಾಗಿ ತರಗತಿ ಹಂತಗಳಲ್ಲಿ ಬಳಸಬಹುದು. ಅದೇ ರೀತಿಯಲ್ಲಿ ಪಾಠಪುಸ್ತಕ ಹಾಗು ಅಧ್ಯಾಪಕರ ಕೈಪುಸ್ತಕಗಳ ಲಿಂಕನ್ನು ಕೊಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಅಧ್ಯಾಪಕರಿಗೆ ಸಹಕಾರಿಯಾಗುವ ಪಾಠಯೋಜನೆಗಳು, ಮೌಲ್ಯಮಾಪನ ಸಾಮಾಗ್ರಿಗಳು, ಇತರ ಸಾಮಾಗ್ರಿಗಳನ್ನು ಲಭ್ಯವಾಗುವಂತೆ ಮಾಡಲಾಗುವುದು. ಇತರ ವೆಬ್‌‌ಸೈಟುಗಳು ಹಾಗು ಎಜುಬ್ಲೋಗುಗಳ ಲಿಂಕನ್ನು ಕೊಡಲಾಗುವುದು.

     ಯಾರಿಗೂ ತಮ್ಮ ಐ.ಸಿ.ಟಿ ಕಲಿಕಾ ಸಾಮಾಗ್ರಿಗಳನ್ನು ಕಳುಹಿಸಿ ಈ ಬೃಹತ್ ಯೋಜನೆಯಲ್ಲಿ ಪಾಲುದಾರರಾಗಬಹುದು ಹಾಗು ನಮ್ಮೊಂದಿಗೆ ಸಹಕರಿಸಬಹುದು. ನಿಮಗೆ ಯಾವುದೇ ಮಾಹಿತಿ ಬೇಕಾದರೆ ನಮ್ಮ ಇ-ಮೈಲ್‌ಗೆ ಸಂಪರ್ಕಿಸಬಹುದು ಹಾಗು ಮಾಹಿತಿಯನ್ನು ಹಂಚಿಕೊಳ್ಳಬಹುದು. ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕವಾದ ಬ್ಲೋಗುಗಳಿವೆ. ಇವುಗಳಲ್ಲಿ ಅವುಗಳನ್ನು ಸೇರಿಸಬಹುದು. ನಿಮ್ಮ ಅತಿ ಸೂಕ್ತವಾದ ಬೆಲೆಬಾಳುವ ಅಭಿಪ್ರಾಯ ಮತ್ತು ಸಲಹೆಗಳಿಗೆ ಸ್ವಾಗತ.

      ಅಭಿಮಾನಪೂರ್ವಕವಾಗಿ ಸಾದರಪಡಿಸುವ ಈ ಯೋಜನೆಯು ಅಧ್ಯಾಪಕರ ಸಮೂಹಕ್ಕಾಗಿ ಸರ್ವರ ಒಗ್ಗಟ್ಟಿನ ಪ್ರಯತ್ನದ ಕೂಸಾಗಿದೆ. ನುರಿತ ಅಧ್ಯಾಪಕರ ತಂಡದ ಹಾಗು ಕಾಸರಗೋಡಿನ ಶೈಕ್ಷಣಿಕ ಅಧಿಕಾರಿಗಳ ಬಲವು ಇದರಲ್ಲಿ ಅಡಗಿದೆ.